ತುಮಕೂರು

ಆರ್ಟಿಐಗೆ ತಪು ್ಪ ಮಾಹಿತಿ: ಇನ್ಸ್ಪೆಕ್ಟರ್ಗೆ ರು. 25ಸಾವಿರ ದಂಡ

Published On :

ತಿಪಟೂರು: ಮಾಹಿತಿ ಹಕ್ಕು ಕಾಯಿದೆಯಡಿ ಸಮರ್ಪಕ ಮಾಹಿತಿ ನೀಡದ ಮತ್ತು ನಿಯಮ ಉಲ್ಲಂಘಿಸಿದ
ಹಿನ್ನಲೆಯಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಕೆ.ಜಿ.ರಾಮಕೃಷ್ಣ ಅವರಿಗೆ ರಾಜ್ಯ ಮಾಹಿತಿ ಆಯೋಗ 25ಸಾವಿರ ರು. ದಂಡ ವಿಧಿಸಿದೆ.
 ತಾಲೂಕಿನ ಮಾಹಿತಿ ಹಕ್ಕು ಕಾರ್ಯಕರ್ತ ಮಲ್ಲಿಪಟ್ಟಣ ಲೋಕೇಶ್ ಗ್ರಾಮಾಂತರ ಠಾಣೆಗೆ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಇನ್ಸ್ಪೆಕ್ಟರ್ ತಪ್ಪು ಮಾಹಿತಿ ನೀಡಿದ್ದಾರೆಂಬ ಕಾರಣಕ್ಕೆ ಮಾಹಿತಿ ಆಯೋಗದ ಆಯುಕ್ತರು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ: ಠಾಣೆ ಮೆಟ್ಟಿಲೇರಿದ್ದ ಮಲ್ಲಿಪಟ್ಟಣ ಗ್ರಾಮದ ಪ್ರಕರಣವೊಂದರ ಕುರಿತು ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಗ್ರಾಮಾಂತರ ಠಾಣೆಗೆ ಎರಡು ವರ್ಷಗಳ ಹಿಂದೆ ಲೋಕೇಶ್ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಗೆ ಸಂಬಂಧಿಸಿ ಆಗಿನ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಮಕೃಷ್ಣ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಲೋಕೇಶ್ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು. ಆಗಲೂ ಕೂಡ ತಪ್ಪು ಮಾಹಿತಿ ನೀಡಿದ್ದರಿಂದ ಮಾಹಿತಿ ಹಕ್ಕು ಆಯೋಗಕ್ಕೆ ಮತ್ತೆ ಮೇಲ್ಮನವಿ ಸಲ್ಲಿಸಿದ್ದರು. 2013ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಇನ್ಸ್ಪೆಕ್ಟರ್ಗೆ ನೋಟಿಸ್ ನೀಡಿತ್ತು. ನಂತರ ನಾನಾ ಹಂತದ ವಿಚಾರಣೆಗಳು ನಡೆದಿದ್ದವು. ಈಚೆಗೆ ನಡೆದ ಅಂತಿಮ ವಿಚಾರಣೆಯಲ್ಲಿ ಆಯೋಗವು ಇನ್ಸ್ಪೆಕ್ಟರ್ಗೆ ದಂಡ ವಿಧಿಸಿ ಆದೇಶ ಹೋರಡಿಸಿದೆ. ತಪ್ಪು ಮಾಹಿತಿ ನೀಡಿದ್ದರ ಜೊತೆಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸದ್ದ ಲೋಕೇಶ್ ಅವರನ್ನು ಠಾಣೆಗೆ ಹಾಜರಾಗಲು ಸೂಚಿಸಿದ್ದು ತಪ್ಪೆಂದು ಆಯೋಗ ಅಭಿಪ್ರಾಯಪಟ್ಟಿದೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ನೇರವಾಗಿ ಮನೆಗೆ ಮಾಹಿತಿ ತಲುಪಿಸಬೇಕು. ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಠಾಣೆಗೆ ಕರೆಸಿಕೊಳ್ಳಬಾರದೆಂಬ ನಿಯಮವನ್ನು ಇನ್ಸ್ಪೆಕ್ಟರ್ ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ಸ್ಪೆಕ್ಟರ್ಗೆ ವಿಧಿಸಿರುವ 25ಸಾವಿರ ರು. ದಂಡವನ್ನು ಅವರ ಐದು ತಿಂಗಳ ಸಂಬಳದಲ್ಲಿ ಸರ್ಕಾರಕ್ಕೆ ಪಾವತಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮಾಹಿತಿ ಹಕ್ಕು ಆಯುಕ್ತರು ಆದೇಶದಲ್ಲಿ ನಿರ್ದೇಶಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.